ಅನುರಾಧಾ

ಅಶ್ವಿನ್ಯಾದಿ 27 ನಕ್ಷತ್ರಗಳಲ್ಲಿ ರಾಧಾ (ಅಂದರೆ ವಿಶಾಖಾ) ನಕ್ಷತ್ರವನ್ನು ಅನುಸರಿಸಿ ಬರುವ 17ನೆಯದು. ವೃಶ್ಚಿಕರಾಶಿಯಲ್ಲಿ ಮೊದಲು ಮೂಡಿಬರುವ ಮೂರು ನಕ್ಷತ್ರಗಳಲ್ಲಿ ಮಧ್ಯದ್ದು.						
(ಎಸ್.ಎನ್.ಕೆ.)
	
ಡೆಲ್ಟಾ ಸ್ಕಾರ್ಪಿಯೈ ಎಂಬುದು ಶಾಸ್ತ್ರೀಯ ನಾಮ. ಈ ನೀಲಿ ನಕ್ಷತ್ರ 1999ರಿಂದೀಚೆಗೆ ಪ್ರಕಾಶದ ಏರಿಳಿತಗಳನ್ನು ಪ್ರದರ್ಶಿಸುತ್ತಿದೆ. ಇದರ ಸುತ್ತ ವಿಸ್ತರಿಸುತ್ತಿರುವ ಅನಿಲವನ್ನು ರೋಹಿತಗಳಿಂದ ಪತ್ತೆ ಮಾಡಲಾಗಿದೆ.
(ಎಸ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ